Thursday, December 15, 2011

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಮೇಲೆ ಸಿವಿಕ್ ಬೆಂಗಳೂರು ಸಂಸ್ಥಯು ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾಲೋಚನಾ ಸಭೆಯ ಸಂಪೂರ್ಣ ವರದಿ

ದಿನಾಂಕ :
04-03-11 ಸಮಯ : 10-30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ
ಸ್ಥಳ : ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಟೆಕ್ನಾಲಜೀಸ್, ಸಂಜೆವಾಣಿ ಪತ್ರಿಕೆ ಕಛೇರಿ ಎದುರು, ಕ್ವೀನ್ಸ್ ರಸ್ತೆ, ಬೆಂಗಳೂರು.
ಭಾಗವಹಿಸಿದವರ ಸಂಖ್ಯೆ : 180+

ಭಾಗವಹಿಸಿದವರು
ಸಮುದಾಯದಿಂದ
1) ಆಶಾಜ್ಯೋತಿ ಸಮುದಾಯ ಅಭಿವೃದ್ಧಿ ಸಂಘ(ಸಿ.ಡಿ.ಎಸ್)ದ ಸದಸ್ಯರು, ಪೂರ್ವ ವಲಯ
2) ನಿರ್ಮಲಜ್ಯೋತಿ ಸಿ.ಡಿ.ಎಸ್ ಸದಸ್ಯರು, ಪೂರ್ವ ವಲಯ, ಬಿ.ಬಿ.ಎಂ.ಪಿ.
3) ಸ್ವರ್ಣಜ್ಯೋತಿ ಸಿ.ಡಿ.ಎಸ್. ಸದಸ್ಯರು, ಪಶ್ಚಿಮ ವಲಯ, ಬಿ.ಬಿ.ಎಂ.ಪಿ.
4) ಆನಂದ ಜ್ಯೋತಿ ಸಿ.ಡಿ.ಎಸ್. ಸದಸ್ಯರು, ಪಶ್ಚಿಮ ವಲಯ
5) ಅಮರ ಜ್ಯೋತಿ ಸಿ.ಡಿ.ಎಸ್ ಸದಸ್ಯರು, ದಕ್ಷಿಣ ವಲಯ
6) ಜ್ಞಾನ ಜ್ಯೋತಿ ಸಿ.ಡಿ.ಎಸ್ ಸದಸ್ಯರು, ದಕ್ಷಿಣ ವಲಯ
7) ಮಹದೇವಪುರ ವಲಯ ಸಿ.ಡಿ.ಎಸ್ ಸದಸ್ಯರು
8) ರಾಜರಾಜೇಶ್ವರಿ ನಗರ ವಲಯ ಸಿ.ಡಿ.ಎಸ್ ಸದಸ್ಯರು
9) ಬೊಮ್ಮನಹಳ್ಳಿ ವಲಯ ಸಿ.ಡಿ.ಎಸ್. ಸದಸ್ಯರು
10) ಬ್ಯಾಟರಾಯನಪುರ ವಲಯ ಸಿ.ಡಿ.ಎಸ್ ಸದಸ್ಯರು
11) ದಾಸರಹಳ್ಳಿ ವಲಯ ಸಿ.ಡಿ.ಎಸ್. ಸದಸ್ಯರು

ಇಲಾಖೆಯಿಂದ
ಬಿ.ಬಿ.ಎಂ.ಪಿಯ ಎಲ್ಲಾ ವಲಯಗಳ ಸಮುದಾಯ ಸಂಘಟಕರು(ಸಿ.ಒ) ಮತ್ತು
ಸಮುದಾಯ ವ್ಯವಹಾರ ಅಧಿಕಾರಿ(ಸಿ.ಎ.ಒ)ಗಳು

ಸರ್ಕಾರೇತರ ಸಂಸ್ಥೆಗಳು
1) ಸಿವಿಕ್ ಬೆಂಗಳೂರು
2) ಅಪ್ಸಾ
3) ದಲಿತ ಬಹುಜನ ಚಳುವಳಿ
4) ವಿದ್ಯಾನಿಕೇತನ
5) ಸಿ-ಫಾರ್
6) ಫೆಡಿನಾ
7) ಗಿಲ್ಗಾಲ್
8) ಮಹಿಳಾ ಮಿಲನ್
9) ಮೈತ್ರಿ ಸರ್ವ ಸೇವಾ ಸಮಿತಿ
10) ಚೈಲ್ಡ್ ರೈಟ್ಸ್ ಟ್ರಸ್ಟ್

ಮುಖ್ಯ ಅತಿಥಿಗಳು
ಶ್ರೀ ಪುರುಶೋತ್ತಮ-ಕ.ಆ.ಸೇ
ಉಪ ಆಯುಕ್ತರು(ಕಲ್ಯಾಣ, ಬಿ.ಬಿ.ಎಂ.ಪಿ)

ಶ್ರೀ ಬಿ.ಎಫ್. ಪಾಟೀಲ್-ಕ.ಆ.ಸೇ
ಅಪರ ಆಯುಕ್ತರು, ದಕ್ಷಿಣ ವಲಯ ಬಿ.ಬಿ.ಎಂ.ಪಿ

ಶ್ರೀಮತಿ ಜಯಂತಿ
ಉಪ ನಿರ್ದೇಶಕರು(ಅಭಿವೃದ್ಧಿ) ಪೌರಾಡಳಿತ ನಿರ್ದೇಶನಾಲಯ

ಶ್ರೀ ಅನ್ ಸೇಲ್ಮ್ ರೊಸಾರಿಯೋ
(ನಿರ್ದೇಶಕರು-ಮೈತ್ರಿ ಸರ್ವಾ ಸೇವಾ ಸಮಿತಿ)

ಶ್ರೀ ವೆಂಕಟೇಶ್.ಎಂ
(ಸಂಚಾಲಕರು-ದಲಿತ ಬಹುಜನ ಚಳುವಳಿ)

ಶ್ರೀಮತಿ ಕಾತ್ಯಾಯಿನಿ ಚಾಮರಾಜ್
(ಕಾರ್ಯ ನಿರ್ವಾಹಕ ಟ್ರಸ್ಟೀ, ಸಿವಿಕ್ ಬೆಂಗಳೂರು)

ಕಾರ್ಯಕ್ರಮದ ಉದ್ದೇಶ
1. ಎಸ್.ಜೆ.ಎಸ್.ಆರ್.ವೈ ಯೋಜನೆಯ ಮಾರ್ಗಸೂಚಿಯ ಬಗ್ಗೆ ಅರಿವು ಮೂಡಿಸುವುದು.
2. ಸ್ವರ್ಣಜಯಂತಿ ಶಹರಿ ರೋಜ್ಗಾರ್ ಯೋಜನೆಯ ಬಗ್ಗೆ ಸಿವಿಕ್ ಸಂಸ್ಥೆ ಸಿದ್ಧಪಡಿಸಿದ ಮಾಹಿತಿ ಕೈಪಿಡಿ ಬಿಡುಗಡೆ ಮಾಡುವುದು.
3. 2009-10 ಮತ್ತು 2010-11ರ ಎಸ್.ಜೆ.ಎಸ್.ಅರ್.ವೈ ಯೋಜನೆಯ ಪ್ರಗತಿಯ ಬಗ್ಗೆ ಚರ್ಚೆ.
4. ಬಿ.ಬಿ.ಎಂ.ಪಿ ವ್ಯಾಪ್ತಿಯ ಎಸ್.ಜೆ.ಎಸ್.ಆರ್.ವೈ ಯೋಜನೆಗೆ ಸಂಬಂಧಪಟ್ಟಂತೆ ಸಮುದಾಯ ಗುಂಪಿನ ಸದಸ್ಯರು ಎದುರಿಸುತ್ತಿರುವ ಸಮಸ್ಯೆ/ಕುಂದುಕೊರತೆಗಳ ಬಗ್ಗೆ ಚರ್ಚೆ.
5. ಎಸ್.ಜೆ.ಎಸ್.ಆರ್.ವೈ ಮಾರ್ಗಸೂಚಿ ಮತ್ತು ವಾಸ್ತವಿಕದ ಮೇಲೆ ಸಿವಿಕ್ ಸಂಸ್ಥೆಯು ನಡೆಸಿದ ಅಧ್ಯಯನದ ಮಂಡನೆ.
6. ಎಸ್.ಜೆ.ಎಸ್.ಆರ್.ವೈನ ಉತ್ತಮ ಅನುಷ್ಠಾನಕ್ಕೆ ಸಿವಿಕ್ ಸಂಸ್ಥೆಯ ಸಲಹೆ/ಶಿಫಾರಸ್ಸುಗಳನ್ನು ಮಂಡಿಸುವುದು.
7. ಎಲ್ಲಾ ಕುಂದುಕೊರತೆ/ಸಮಸ್ಯೆಗಳಿಗೆ ಕಾರಣವನ್ನು ಹುಡುಕಿ ಬಂದಂತಹ ಎಲ್ಲಾ ಕುಂದುಕೊರತೆಗಳಿಗೆ ಪರಿಹಾರ ಕಂಡುಕೊಂಡು ಎಸ್.ಜೆ.ಎಸ್.ಆರ್.ವೈ ಯೋಜನೆಯು ಉತ್ತಮವಾಗಿ ಅನುಷ್ಠಾನಗೊಳ್ಳುವಂತೆ ಮಾಡುವುದು.

ಕಾರ್ಯಕ್ರಮದಲ್ಲಿ ಚರ್ಚಿಸಿದ ವಿಷಯಗಳು ಹಾಗೂ ಕಂಡುಬಂದ ಸಮಸ್ಯೆಗಳು
ಅರಿವಿ(ಜ್ಞಾನ)ನ ಮತ್ತು ಸಶಕ್ತತೆಯ ಕೊರತೆ:

1. ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆಯಾಗಲೀ/ಸಂಘಗಳನ್ನು ನಿರ್ವಹಿಸುವ ಬಗ್ಗೆಯಾಗಲೀ ಸಮುದಾಯಕ್ಕೆ ಇದುವರೆಗೂ ಇಲಾಖೆಯು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಹಾಗಾಗಿ ಯೋಜನೆಯ ಬಗ್ಗೆ ಬಹಳಷ್ಟು ಜನರಿಗೆ ಅರಿವಿಲ್ಲವಾಗಿದೆ.
2. ಕೆಲವು ವಲಯಗಳ ಸಿ.ಡಿ.ಎಸ್. ಸದಸ್ಯರಿಗೆ ಪೌರಾಡಳಿತ ನಿರ್ದೇಶನಾಲಯ ಮತ್ತು ಬಿ.ಬಿ.ಎಂ.ಪಿ ಕಳುಹಿಸುವ ಸುತ್ತೋಲೆ/ಆದೇಶಗಳನ್ನು ತಲುಪಿಸುತ್ತಿಲ್ಲ ಹಾಗೂ ಸಭೆಗಳ ವರದಿ/ನಡಾವಳಿಗಳ ಮಾಹಿತಿಯನ್ನು ನೀಡುತ್ತಿಲ್ಲ.
3. ಬಿ.ಬಿ.ಎಂ.ಪಿ ವ್ಯಾಪ್ತಿಗೆ ಈ ಹಿಂದಿನ ಗ್ರಾಮೀಣ ಪ್ರದೇಶಗಳನ್ನೂ ಸೇರಿಸಿದೆ. ಆದರೆ ಅಲ್ಲಿನ ಜನರಿಗೆ ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ ಹಾಗೂ ಅಲ್ಲಿ ಯಾವುದೇ ಸಮದಾಯ ಗುಂಪುಗಳನ್ನು ರಚಿಸಿಲ್ಲ.
4. ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಕನ್ನಡದಲ್ಲಿ ಯಾವುದೇ ಮಾಹಿತಿ ಕೈಪಿಡಿಯನ್ನು ಇಲಾಖೆಯು ಹೊರತಂದಿಲ್ಲ.
5. ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಜೆಟ್, ವೆಚ್ಚ, ಫಲಾನುಭವಿಗಳ ಪಟ್ಟಿ ಇತ್ಯಾದಿ ಸೇರಿದಂತೆ ಯಾವುದೇ ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ(In Public Domain) ದೊರಕುವಂತಹ ವ್ಯವಸ್ಥೆ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಇಲ್ಲ.

ಸಾಂವಿಧಾನಿಕವಾಗಿ ಸಮುದಾಯದ ಗುಂಪುಗಳು ರಚನೆಯಾಗಿಲ್ಲ:

6. ಬಹುತೇಕ ಬಿ.ಬಿ.ಎಂ.ಪಿ ವಲಯಗಳಲ್ಲಿ ಸಮುದಾಯ ಅಭಿವೃದ್ಧಿ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಕೇವಲ 12 ರಿಂದ 15 ಜನ ಸದಸ್ಯರಿದ್ದು, ಕೆಲವು ವಲಯಗಳಲ್ಲಿ ಪಾಲಿಕೆ ಸದಸ್ಯರು(ಮಹಿಳೆಯರು) ಒಳಗೊಂಡಿದ್ದಾರೆ. ಆದರೆ ಮಾರ್ಗಸೂಚಿಯ ಪ್ರಕಾರ ಸರ್ಕಾರೇತರ ಸಂಘಟನೆಗಳು, ನಗರ ಪಾಲಿಕಾ ಮಹಿಳಾ ಸದಸ್ಯರು, ಇತರ 4 ಅನ್ವಯಿಕ ಇಲಾಖೆಗಳು ಸೇರಿದಂತೆ ಒಟ್ಟು 23 ಸದಸ್ಯರಿರಬೇಕು. ಅಲ್ಲದೆ ಸಿ.ಡಿ.ಎಸ್. ಸದಸ್ಯರು ಮಾರ್ಗಸೂಚಿಯ ಪ್ರಕಾರ ಆಯ್ಕೆ ಆಗುತ್ತಿಲ್ಲ. ಬದಲಾಗಿ ಅಧಿಕಾರಿಗಳಿಂದ ನಾಮ ನಿರ್ದೇಶನಗೊಳ್ಳುತ್ತಿದ್ದಾರೆ.
7. ನೆರೆಹೊರೆ ಗುಂಪು, ನೆರೆಹೊರೆ ಸಮಿತಿ ಹಾಗೂ ಸಮುದಾಯ ಅಭಿವೃದ್ಧಿ ಸಂಘ ಎಂಬ ಸಮುದಾಯ ಸಂರಚನೆಗಳನ್ನು ರಚಿಸಬೇಕು ಆದರೆ ಬಿ.ಬಿ.ಎಂ.ಪಿಯಲ್ಲಿ ನೆರೆಹೊರೆ ಗುಂಪು ಮತ್ತು ನೆರೆಹೊರೆ ಸಮಿತಿಗಳನ್ನು ರಚಿಸಿಲ್ಲ. ಅಲ್ಲದೆ ಇಂದು ಅನೇಕ ನಿರಂತರ ಉಳಿತಾಯ ಗುಂಪುಗಳು ನಿಷ್ಕ್ರಿಯವಾಗಿವೆ.

ನಿಜವಾದ ಬಡವರನ್ನು ಗುರುತಿಸುವ ಹೊಸ ಸಮೀಕ್ಷೆ ಆಗಿಲ್ಲ:

8. 1998ರಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯಡಿ ಮಾಡಿದ ಸಮೀಕ್ಷೆಯಲ್ಲಿನ ಬಡ ಕುಟುಂಬಗಳು ಇಂದು ಬಡತನ ರೇಖೆಗಿಂತ ಮೇಲೆ ಇದ್ದು ಉತ್ತಮ ಜೀವನ ನಡೆಸುತ್ತಿದ್ದಾರೆ. ಆದರೆ ಅಂತಹವರೇ ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು ನಿಜವಾದ ಬಡಕುಟುಂಬಗಳು ಈ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ನಿಜವಾದ ಬಡಜನರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ. ನಿಜವಾದ ಬಡಜನರನ್ನು ಗುರುತಿಸುವ ಹೊಸ ಸಮೀಕ್ಷೆ ಮಾಡಿಲ್ಲ.
9. 1998ರಲ್ಲಿ ಮಾಡಿದ ಸಮೀಕ್ಷೆಯಲ್ಲಿ ಬಿ.ಬಿ.ಎಂ.ಪಿಯ ಅನೇಕ ಸ್ಲಂ ಪ್ರದೇಶಗಳನ್ನು ಕೈಬಿಡಲಾಗಿದೆ ಹಾಗೂ ಇಂದು ಬಿ.ಬಿ.ಎಂ.ಪಿಗೆ ಅನೇಕ ಗ್ರಾಮೀಣ ಪ್ರದೇಶಗಳನ್ನು ಸೇರಿಸಿದ್ದು ಅಲ್ಲಿನ ಬಡಜನರನ್ನೂ ಗುರುತಿಸುವ ಕಾರ್ಯ ಇನ್ನೂ ಆಗಿಲ್ಲ.

ಇಲಾಖೆಯ ದುರ್ಬಲ ಆಡಳಿತಾತ್ಮಕ ವ್ಯವಸ್ಥೆ ಮತ್ತು ಅಧಿಕಾರಿಗಳ ಸಮಸ್ಯೆಗಳು:

10. 2009-10 ರ ಅವಧಿಯಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಗೆ ರೂ. 6.69 ಕೋಟಿ ಮತ್ತು 2010-11ರಲ್ಲಿ(ಡಿಸೆಂಬರ್ ವರೆಗೆ) ರೂ. 3.2 ಕೋಟಿ ಬಿಡುಗಡೆಯಾಗಿದ್ದು. ಈ ಅವಧಿಯಲ್ಲಿ ಖರ್ಚಾದ ಹಣ ತಲಾ ಕೇವಲ 92.8 ಲಕ್ಷ(14%) ಮತ್ತು 79.48 ಲಕ್ಷ(20%) ಮಾತ್ರ.
11. ಬಿ.ಬಿ.ಎಂ.ಪಿಯಲ್ಲಿ ನಗರ ಬಡತನ ನಿರ್ಮೂಲನಾ ಕೋಶ(ಯುಪಿಎ) ಸ್ಥಾಪಿನೆಯಾಗಿದ್ದರೂ ಅದು ಎಸ್.ಜೆ.ಎಸ್.ಆರ್.ವೈ ಯೋಜನೆಯ ಮುಖ್ಯ ಉದ್ದೇಶವಾದ ಏಕಗವಾಕ್ಷಿ ವ್ಯವಸ್ಥೆಗೆ(Single window system) ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ ರಾಜ್ಯ ಮಟ್ಟದಲ್ಲಿ ನಗರ ಬಡತನ ನಿವಾರಣಾ ಪ್ರಾಧಿಕಾರ(State level Urban Poverty Alleviation Authority) ಸ್ಥಾಪಿಸಬೇಕು. ಆದರೆ ಇದು ಸ್ಥಾಪನೆಯಾಗಿಲ್ಲ.
12. ಸಮೂಹ ಮಟ್ಟದಲ್ಲಿ ಸುಮಾರು 80 ಲಕ್ಷ ವೆಚ್ಚದಲ್ಲಿ ಮೈಕ್ರೋ ಬ್ಯುಸಿನೆಸ್ ಸೆಂಟರ್ಸ್(ಎಂ.ಬಿ.ಸಿ)ಗಳನ್ನು ಸ್ಥಾಪಿಸಬೇಕು. ಆದರೆ ಇವುಗಳನ್ನು ಬಿ.ಬಿ.ಎಂ.ಪಿಯಲ್ಲಿ ಸ್ಥಾಪಿಸಲಾಗಿಲ್ಲ.
13. ಸಮುದಾಯ ವ್ಯವಹಾರ ಅಧಿಕಾರಿ ಹಾಗೂ ಸಮುದಾಯ ಸಂಘಟಕರು ಎಸ್.ಜೆ.ಎಸ್.ಆರ್.ವೈ ಯೋಜನೆಯ ಕೆಲಸಕ್ಕಿಂತ ಹೆಚ್ಚಾಗಿ ಬಿ.ಬಿ.ಎಂ.ಪಿ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ. ಅಲ್ಲದೆ ಅವರಿಗೆ ಅನೇಕ ಸಮೀಕ್ಷೆಗಳನ್ನು ಮಾಡಲು ಜವಾಬ್ದಾರಿ ಹೊರಿಸಲಾಗಿದೆ.
14. ಎಸ್.ಜೆ.ಎಸ್.ಆರ್.ವೈನ ವಿವಿಧ ಯೋಜನೆಗಳಿಗೆ ಅನುಮೋದನೆ ಪಡೆಯಲು ಎಲ್ಲಾ ಬಿ.ಬಿ.ಎಂ.ಪಿ ವಲಯಗಳು ಬಿ.ಬಿ.ಎಂ.ಪಿಯ ಮುಖ್ಯ ಕಛೇರಿಗೆ ಕಳುಹಿಸಿದರೆ ಅಲ್ಲಿಂದ ಅನುಮೋದನೆಯಾಗಿ ಬರುವುದು ತುಂಬಾ ವಿಳಂಬವಾಗುತ್ತಿದೆ.
15. ಬಹಳಷ್ಟು ಫಲಾನುಭವಿಗಳಿಗೆ ಸಾಲ ಮತ್ತು ಸಹಾಯಧನ ಬಿಡುಗಡೆಯಾಗಲು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವಾಗುತ್ತಿದೆ.
16. ಸಮುದಾಯ ಸಂಘಟಕರು ಸಮುದಾಯದ ಗುಂಪಿನ ಪ್ರತಿನಿಧಿಗಳಿಗೆ ಸರಿಯಾಗಿ ಸ್ಪಂಧಿಸುವುದಿಲ್ಲ.
17. ಬಿ.ಬಿ.ಎಂ.ಪಿ.ಯಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆ ಮೇಲೆ ಕಾರ್ಯ ನಿರ್ವಹಿಸುವ ಅಧಿಕಾರಿ ಸಿಬ್ಬಂದಿ ತುಂಬಾ ಕಡಿಮೆ ಇದ್ದಾರೆ. ಮಾರ್ಗಸೂಚಿಯ ಪ್ರಕಾರ 2000 ಬಿ.ಪಿ.ಎಲ್ ಕುಟುಂಬಗಳಿಗೆ ಒಬ್ಬ ಸಮುದಾಯ ಸಂಘಟಕರು ಇರಬೇಕು. ಆದರೆ ಪ್ರಸ್ತುತ ಬಿ.ಬಿ.ಎಂ.ಪಿ.ಯಲ್ಲಿ ಸರಾಸರಿ 6000 ಬಿ.ಪಿ.ಎಲ್ ಕುಟುಂಬಗಳಿಗೆ ಒಬ್ಬ ಸಮುದಾಯ ಸಂಘಟಕರು ಮಾತ್ರ ಇದ್ದಾರೆ.
18. ಸಾಲ ಮತ್ತು ಸಹಾಯಧನವನ್ನು ಪಡೆದು ಉದ್ಯೋಗ ಆರಂಭಿಸಲು ಮಾರ್ಕೆಟಿಂಗ್ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಸರ್ಕಾರ ಯಾವುದೇ ರೀತಿಯಲ್ಲಿ ಸಹಾಯ ಮಾಡುತ್ತಿಲ್ಲ.

ಬ್ಯಾಂಕಿನ ಸಮಸ್ಯೆ:
19. ಬಹಳಷ್ಟು ಬ್ಯಾಂಕ್ ವ್ಯವಸ್ಥಾಪಕರು ಸಾಲಕ್ಕೆ ಭದ್ರತೆ(collateral) ಕೇಳುತ್ತಿದ್ದಾರೆ. ಆದರೆ ಮಾರ್ಗಸೂಚಿಯ ಪ್ರಕಾರ ಸಾಲಕ್ಕೆ ಭದ್ರತೆಯನ್ನು ಕೇಳುವಂತಿಲ್ಲ.
20. ಪ್ರತಿ ತಿಂಗಳ ಸಿ.ಡಿ.ಎಸ್. ಸಭೆಗೆ ಬ್ಯಾಂಕಿನಿಂದ ಯಾರೂ ಭಾಗವಹಿಸುವುದಿಲ್ಲ.


ಬಿ.ಬಿ.ಎಂ.ಪಿಯ ಮುದಾಯ ಅಭಿವೃದ್ಧಿ ಸಂಘ(ಸಿ.ಡಿ.ಎಸ್)ಗಳು ಎದುರಿಸುತ್ತಿರುವ ಸಮಸ್ಯೆಗಳು:

21. ಕೆಲವು ಬಿ.ಬಿ.ಎಂ.ಪಿ ವಲಯಗಳಲ್ಲಿ ಒಂದೇ ಸಿ.ಡಿ.ಎಸ್ ಇರುವುದರಿಂದ ಹಾಗೂ ಭೌಗೋಳಿಕವಾಗಿ ಸಾರಿಗೆ ವ್ಯವಸ್ಥೆಯ ತೊಂದರೆ ಇರುವುದರಿಂದ ಎಲ್ಲಾ ಸಿ.ಡಿ.ಎಸ್. ಸದಸ್ಯರು ಪ್ರತಿ ತಿಂಗಳು ಸಭೆ ಸೇರಲು ಸಾಧ್ಯವಾಗುತ್ತಿಲ್ಲ. ಉದಾ: ಮಹದೇವಪುರ ವಲಯ ಬಿ.ಬಿ.ಎಂ.ಪಿ.
22. ಸಿ.ಡಿ.ಎಸ್. ಸದಸ್ಯರಿಗೆ ಸಾರಿಗೆ ಸೌಲಭ್ಯ (ಟಿ.ಎ) ಇಲ್ಲ.
23. ಸಿ.ಡಿ.ಎಸ್. ಸದಸ್ಯರು ಪ್ರತಿ ತಿಂಗಳು ಸಭೆ ಸೇರಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳು ಸ್ಪಂಧಿಸುವುದಿಲ್ಲ.
24. ಬಿ.ಬಿ.ಎಂ.ಪಿಯ ಯಾವುದೇ ವಲಯದ ಸಮುದಾಯ ಅಭಿವೃದ್ಧಿ ಸಂಘಕ್ಕೆ ಲೆಟರ್ ಹೆಡ್ ಮತ್ತು ಗುರುತಿನ ಚೀಟಿ(ಐಡಿ ಕಾರ್ಡ್)ಇಲ್ಲ. ಇದರಿಂದ ಬ್ಯಾಂಕ್ ಅಧಿಕಾರಿಗಳು ಮತ್ತು ಇತರ ಇಲಾಖಾ ಅಧಿಕಾರಿಗಳು ಸರಿಯಾಗಿ ಸ್ಪಂಧಿಸುವುದಿಲ್ಲ.

ಇತರ ಸಮಸ್ಯೆಗಳು:
25. ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕಾದರೆ ಗರಿಷ್ಠ 45 ವರ್ಷಗಳ ವಯೋಮಿತಿಯನ್ನು ನಿಗದಿ ಪಡಿಸಲಾಗಿದೆ. ಹೀಗಾಗಿ ಅನೇಕ ಬಡವರು ಈ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ

ಈ ಸಮಸ್ಯೆಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮುದಾಯ ಮತ್ತು ಅಪ್ಸಾ ಹಾಗೂ ಸಿವಿಕ್ ಸಂಸ್ಥೆಯ ಸಲಹೆಗಳು

ಏಕ-ಗವಾಕ್ಷಿ ವ್ಯವಸ್ಥೆSingle window System) :
1. ಬಿ.ಬಿ.ಎಂ.ಪಿ.ಯಲ್ಲಿ ಏಕ-ಗವಾಕ್ಷಿ ವ್ಯವಸ್ಥೆ(ಖಟಿರಟಜ-ತಿಟಿಜಠತಿ ಥಿಣಜಟ) ಯನ್ನು ಸ್ಥಾಪಿಸಿ ಬಡತನ ನಿವಾರಣೆಗೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳು ಒಂದೆಡೆ ಸಿಗುವಂತೆ ಮಾಡಬೇಕು.


ಅರಿವು ಮೂಡಿಸುವುದು:
2. ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಕರ ಪತ್ರ ಹಾಗೂ ಕಿರುಹೊತ್ತಿಗೆ ಪುಸ್ತಕವನ್ನು ಮಾಡಿ ಎಲ್ಲಾ ಬಡಜನರಿಗೆ ಹಂಚಬೇಕು.
3. ಎಸ್.ಜೆ.ಎಸ್.ಆರ್.ವೈ ಯೋಜನೆಗೆ ಸಂಬಂಧಿಸಿದ ಪ್ರತಿಯೊಂದು ಸುತ್ತೋಲೆ/ಆದೇಶ/ಫಲಾನುಭವಿಗಳ ಪಟ್ಟಿ ಸಭೆಗಳ ವರದಿ/ನಡಾವಳಿಗಳು ಇತ್ಯಾದಿ ಸೇರಿದಂತೆ ಸರ್ವ ಮಾಹಿತಿಯನ್ನೂ ಸಿ.ಡಿ.ಎಸ್ ಸದಸ್ಯರಿಗೆ ನೀಡಬೇಕು.
4. ಹೊಸದಾಗಿ ಬಿ.ಬಿ.ಎಂ.ಪಿಗೆ ಸೇರ್ಪಡೆ ಮಾಡಿರುವ ಪ್ರದೇಶಗಳಲ್ಲಿ ಟಿ.ಸಿ.ಜಿ ಗುಂಪುಗಳನ್ನು ರಚಿಸಿ ಮತ್ತು ಅರಿವನ್ನು ಮೂಡಿಸಿ ಆ ಗುಂಪುಗಳಿಗೆ ಆವರ್ತಕ ನಿಧಿಯನ್ನು ನೀಡಿ ಬೆಂಬಲಿಸಬೇಕು.
5. 16.07.10ರಂದು ಪೌರಾಡಳಿತ ನಿರ್ದೇಶನಾಲಯವು ಬಿ.ಬಿ.ಎಂ.ಪಿಗೆ ಕಳುಹಿಸಿರುವ ಸುತ್ತೋಲೆಯಂತೆ ಎಲ್ಲಾ ನೆರೆಹೊರೆ ಗುಂಪು, ನೆರೆಹೊರೆ ಸಮಿತಿ ಹಾಗೂ ಸಮುದಾಯ ಅಭಿವೃದ್ಧಿ ಸಂಘಗಳಿಗೆ ಎಸ್.ಜೆ.ಎಸ್.ಆರ್.ವೈ ಯೋಜನೆಯ ಮಾರ್ಗಸೂಚಿಯ ಬಗ್ಗೆ ಆದಷ್ಟು ಬೇಗ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
6. ಆಯಾ ವಲಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಸರ್ಕಾರೇತರ ಸಂಸ್ಥೆಗಳನ್ನು ಎಸ್.ಜೆ.ಎಸ್.ಆರ್.ವೈನ ಉತ್ತಮ ಅನುಷ್ಠಾನಕ್ಕಾಗಿ ಸಿ.ಡಿ.ಎಸ್ ನಲ್ಲಿ ಸೇರಿಸಿಕೊಳ್ಳಬೇಕು.

ಕ್ರಿಯಾ ಯೋಜನೆ :
7. ಅಧಿಕಾರಿಗಳು(ಸಿ.ಒ ಮತ್ತು ಸಿ.ಎ.ಒ) ಎಲ್ಲಾ ಮಟ್ಟದ ಸಮುದಾಯ ಗುಂಪುಗಳ ಸದಸ್ಯರನ್ನು ಸಭೆ ಕರೆದು ಕ್ರಿಯಾ ಯೋಜನೆಯನ್ನು ತಯಾರಿಸಬೇಕು. ಈ ಕ್ರಿಯಾ ಯೋಜನೆಯಲ್ಲಿ ಪ್ರತಿಯೊಂದು ಯೋಜನೆಗೂ ಸಮಯ ನಿಗದಿ ಪಡಿಸಬೇಕು. ಉದಾ: MPIC (Monthly Implementation Calender Programme) ನ ಮಾದರಿಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಬೇಕು.

ಉತ್ತಮ ಆಡಳಿತ ವ್ಯವಸ್ಥೆ ಇರಬೇಕು:
8. ಎಸ್.ಜೆ.ಎಸ್.ಆರ್.ವೈ ಯೋಜನೆಗೆ ಬಿಡುಗಡೆಯಾಗುವ ಹಣವನ್ನು ಬಿಡುಗಡೆಯಾದ ಆಯಾ ಹಣಕಾಸು ವರ್ಷದಲ್ಲಿಯೇ ವೆಚ್ಚವಾಗುವಂತೆ ಮಾಡಬೇಕು.
9. ನಿಗದಿತ ಸಮಯದಲ್ಲಿ ಅಧಿಕಾರಿಗಳು ಯೋಜನೆಯನ್ನು ಅನುಷ್ಠಾನಗೊಳಿಸದಿದ್ದಲ್ಲಿ ಅಧಿಕಾರಿಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.
10. ಎಲ್ಲಾ ವಲಯಗಳಿಂದ ಎಸ್.ಜೆ.ಎಸ್.ಆರ್.ವೈನ ವಿವಿಧ ಯೋಜನೆಗಳಿಗೆ ಅನುಮೋದನೆಗಾಗಿ ಬಿ.ಬಿ.ಎಂ.ಪಿ ಮುಖ್ಯ ಕಛೇರಿಗೆ ಕಳುಹಿಸಿದಾಗ ಬಹುಬೇಗನೆ ಅನುಮೋದನೆಯನ್ನು ನೀಡಬೇಕು.
11. ಸಾಲ ಮತ್ತು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಫಲಾನುಭವಿಗೂ ಒಂದು ತಿಂಗಳ ಅವಧಿಯಲ್ಲಿ ಸಾಲ ಮತ್ತು ಸಹಾಯಧನದ ಮಂಜೂರಾತಿ ಸಿಗುವಂತೆ ಮಾಡಬೇಕು.
12. ಪ್ರತಿ ವಾರ್ಡ್ ಗೊಬ್ಬರಂತೆ ಸಮುದಾಯ ಸಂಘಟಕರನ್ನು ಎಸ್.ಜೆ.ಎಸ್.ಆರ್.ವೈ ಯೋಜನೆಯ ಕಾರ್ಯನಿರ್ವಹಣೆಗಾಗಿ ತೊಡಗಿಸಬೇಕು.

ಮೈಕ್ರೋ ಬ್ಯುಸಿನೆಸ್ ಸೆಂಟರ್ಸ್ :
13. ಫಲಾನುಭವಿಗಳಿಗೆ ಮಾರ್ಕೆಟಿಂಗ್ ಸಹಾಯವನ್ನು ಇಲಾಖೆಯು ಕಡ್ಡಾಯವಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮೈಕ್ರೋ ಬ್ಯುಸಿನೆಸ್ ಸೆಂಟರ್ಸ್ ಗಳನ್ನು ಆದಷ್ಟು ಬೇಗ ಕಡ್ಡಾಯವಾಗಿ ಸ್ಥಾಪಿಸಬೇಕು.
14. ಬಡಜನರು ಉದ್ಯೋಗಗಳನ್ನು ಕೈಗೊಳ್ಳಲು ಸ್ಥಳದ ಅಭಾವವನ್ನು ಎದುರಿಸುತ್ತಿರುವುದರಿಂದ ಬಿ.ಡಿ.ಎ ಮತ್ತು ಬಿ.ಬಿ.ಎಂ.ಪಿಯ ವಾಣಿಜ್ಯ ಸಂಕೀರ್ಣ(ಮಳಿಗೆ)ಗಳಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಫಲಾನುಭವಿಗಳಿಗೆ ಮೀಸಲಿಡಬೇಕು.

ಸಾಂವಿಧಾನಿಕ ಸಮುದಾಯ ಗುಂಪುಗಳ ರಚನೆ:
15. ಮಾರ್ಗಸೂಚಿಯು ತಿಳಿಸುವಂತೆ ನೆರೆಹೊರೆ ಗುಂಪು, ನೆರೆಹೊರೆ ಸಮಿತಿ, ಸಮುದಾಯ ಅಭಿವೃದ್ಧಿ ಸಂಘ ಎಂಬ ಎಲ್ಲಾ ಗುಂಪುಗಳನ್ನು ರಚಿಸಬೇಕು.
16. ಪ್ರತಿ ವಾರ್ಡ್ ಗೊಬ್ಬರಂತೆ ಸಮನಾಗಿ ಸಿ.ಡಿ.ಎಸ್.ಸದಸ್ಯರ ಆಯ್ಕೆಯಾಗಬೇಕು (ಸಮುದಾಯದ ಜನರೇ ಚುನಾಯಿಸಬೇಕು) ಮತ್ತು ಮಾರ್ಗಸೂಚಿಯಲ್ಲಿರುವಂತೆ ಸಿ.ಡಿ.ಎಸ್.ನಲ್ಲಿ ಒಟ್ಟು 23 ಸದಸ್ಯರನ್ನು ಆಯ್ಕೆಮಾಡಬೇಕು(4 ಅನ್ವಯಿಕ ಇಲಾಖಾ ಅಧಿಕಾರಿಗಳನ್ನೊಳಗೊಂಡು (Line Departments Officials) ಹಾಗೂ ಬಿ.ಬಿ.ಎಂ.ಪಿಗೆ ಹೊಸದಾಗಿ ಸೇರ್ಪಡೆಯಾಗಿರುವ ಪ್ರದೇಶಗಳಲ್ಲಿ ಸಿ.ಡಿ.ಎಸ್ ಸದಸ್ಯರು ಆಯ್ಕೆಯಾಗುವಂತೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು.
17. ಸಮುದಾಯ ಅಭಿವೃದ್ಧಿ ಸಂಘಗಳನ್ನು ಪ್ರತಿ 10 ವಾರ್ಡ್ ಗಳಿಗೊಂದರಂತೆ ರಚಿಸಬೇಕು.
18. ಎಸ್.ಜೆ.ಎಸ್.ಆರ್.ವೈ ಯೋಜನೆಯ ಮಾರ್ಗಸೂಚಿಯ ಪ್ರಕಾರ ತಿಳಿಸುವಂತೆ ಸಿ.ಡಿ.ಎಸ್. ಸಭೆಯು ಪ್ರತಿ ತಿಂಗಳಿಗೊಮ್ಮೆ ಮತ್ತು ಮಹಾ ಸಭೆಯು ಪ್ರತಿ ಆರು ತಿಂಗಳಿಗೊಮ್ಮೆ ನಡೆಯುವಂತೆ ಮಾಡಬೇಕು ಹಾಗೂ ಆಯಾ ವಲಯದ ಜಂಟಿ ಆಯುಕ್ತರು ಪ್ರತಿ ತಿಂಗಳ ಸಿ.ಡಿ.ಎಸ್. ಸಭೆಗೆ ಬಂದು ಸಲಹೆ/ ನಿರ್ದೇಶನ ನೀಡಬೇಕು.
19. ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ರಚಿಸಲಾಗಿರುವ ಎಲ್ಲಾ ಸಂಘ/ಗುಂಪುಗಳಿಗೆ ಅವಶ್ಯಕವಾಗಿರುವ ಪುಸ್ತಕಗಳನ್ನು ನೀಡಬೇಕು.
20. ನಿಷ್ಕ್ರಿಯವಾಗಿರುವ ಎಲ್ಲಾ ನಿರಂತರ ಉಳಿತಾಯ ಮತ್ತು ಸಾಲ (ಟಿ.ಸಿ.ಜಿ.) ಗುಂಪುಗಳನ್ನು ಪುನಃಚೇತನಗೊಳಿಸಬೇಕು.

ಸಮುದಾಯ ಅಭಿವೃದ್ಧಿ ಸಂಘಗಳ(ಸಿ.ಡಿ.ಎಸ್) ಮುಖ್ಯ ಬೇಡಿಕೆ ಈಡೇರಿಸಬೇಕು :
21. ಸಿ.ಡಿ.ಎಸ್. ಸದಸ್ಯರಿಗೆ ಸಾರಿಗೆ ಸೌಲಭ್ಯವನ್ನು(ಟಿ.ಎ) ಕೊಡಬೇಕು.
22. ಸಮುದಾಯ ಅಭಿವೃದ್ಧಿ ಸಂಘದ ಹೆಸರಲ್ಲಿ ಲೆಟರ್ ಹೆಡ್ ಮಾಡಿಸಿಕೊಡಬೇಕು ಹಾಗೂ ಎಲ್ಲಾ ಸಿ.ಡಿ.ಎಸ್ ಸದಸ್ಯರಿಗೂ ಗುರುತಿನ ಚೀಟಿ(ಐ.ಡಿ ಕಾರ್ಡ್)ಯನ್ನು ನೀಡಬೇಕು.
23. ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ಸಾಲ ಮತ್ತು ಸಹಾಯಧನವನ್ನು ಪಡೆಯಲು ಈಗಿರುವ 45ವರ್ಷಗಳ ಗರಿಷ್ಠ ವಯೋಮಿತಿಯನ್ನು ಹೆಚ್ಚಿಸಬೇಕು.

24. ಬಿ.ಬಿ.ಎಂ.ಪಿ ಕಛೇರಿ ಕೆಲಸಕ್ಕೆ ಬೇಕಾಗಿರುವ ಕೆಲವು ವಸ್ತುಗಳನ್ನು ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯಲ್ಲಿ ರಚಿಸಲಾಗಿರುವ ಸ್ವ-ಸಹಾಯ ಗುಂಪುಗಳಿಂದಲೇ ಕೊಂಡುಕೊಳ್ಳಬೇಕು. ಉದಾ : ಕಛೇರಿಗೆ ಅವಶ್ಯವಾಗಿರುವ ಫೈಲ್ಸ್, ಪೆನ್ಸ್, ಎನ್ವಾಲಪ್ಸ್, ಹಾಗೂ ಇತರೆ ವಸ್ತುಗಳು.
25. ಬಿ.ಬಿ.ಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ಗುತ್ತಿಗೆ ಕಾರ್ಯಗಳಲ್ಲಿ ಎಸ್.ಜೆ.ಎಸ್.ಆರ್.ವೈ ಅಡಿಯಲ್ಲಿ ರಚಿಸಲಾಗಿರುವ ಸ್ವ-ಸಹಾಯ ಗುಂಪುಗಳ ಮಹಿಳೆಯರಿಗೆ ಮೀಸಲಾತಿ ಒದಗಿಸಿ ಗುತ್ತಿಗೆ ಕಾರ್ಯಗಳನ್ನು ನೀಡಬೇಕು.

ಬ್ಯಾಂಕ್ ಗಳ ವಿರುದ್ಧ ಕಠಿಣ ಕ್ರಮ:
26. ಬ್ಯಾಂಕಿನಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಸಾಲಕ್ಕೆ ಭದ್ರೆತೆಯನ್ನು ಕೇಳಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
27. ಆಯಾ ಸಿ.ಡಿ.ಎಸ್. ವ್ಯಾಪ್ತಿಯ ಬ್ಯಾಂಕುಗಳು ಪ್ರತಿ ತಿಂಗಳ ಸಿ.ಡಿ.ಎಸ್. ಸಭೆಗೆ ಬರಬೇಕು.
28. ಬ್ಯಾಂಕಿನವರು ಯಾವ್ಯಾವ ಅರ್ಜಿಯನ್ನು ಸೆಲೆಕ್ಟ್ ಮಾಡಲಾಗಿದೆ ಹಾಗೂ ಯಾವ್ಯಾವ ಅರ್ಜಿಗಳನ್ನು ರಿಜೆಕ್ಟ್ ಮಾಡಲಾಗಿದೆ ಎಂದು ಸಿ.ಡಿ.ಎಸ್ ಸಭೆಯಲ್ಲಿ ಹೇಳಬೇಕು. ಹೀಗೆ ಮಾಡಿದರೆ ಪಾರದರ್ಶಕತೆ ಉಂಟಾಗುತ್ತದೆ.
29.ಬ್ಯಾಂಕುಗಳ ಅಧಿಕಾರಿಗಳು 1 ತಿಂಗಳ ಒಳಗಾಗಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಸಾಲದ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಇಲ್ಲವಾದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

ಉಪ ಆಯುಕ್ತರು ( Welfare- BBMP)ಈ ಕಾರ್ಯಕ್ರಮದಲ್ಲಿ ತೆಗೆದುಕೊಂಡ ನಿರ್ಧಾರಗಳು

1. ಬಿ.ಬಿ.ಎಂ.ಪಿಯ ಕಲ್ಯಾಣ ಇಲಾಖೆಯ ಆಡಳಿತಾತ್ಮಕ ಸಮಸ್ಯೆಗಳ ಬಗ್ಗೆ ಕ್ರಮಗಳನ್ನು ಕೈಗೊಳ್ಳಲು ಎಲ್ಲಾ ವಲಯಗಳ ಕಲ್ಯಾಣಾಧಿಕಾರಿ, ಸಮುದಾಯ ವ್ಯವಹಾರ ಅಧಿಕಾರಿ ಮತ್ತು ಸಮುದಾಯ ಸಂಘಟಕರನ್ನು ಸಭೆ ಕರೆದು ಚರ್ಚೆ ಮಾಡುತ್ತೇನೆಂದು ನಿರ್ಧಾರ ತೆಗೆದುಕೊಂಡರು.
2. ಕಾರ್ಯಕ್ರಮದಲ್ಲಿ ಬಂದ ಎಲ್ಲಾ ಸಲಹೆ ಮತ್ತು ಶಿಫಾರಸ್ಸುಗಳನ್ನು ಎಸ್.ಜೆ.ಎಸ್.ಆರ್.ವೈ ಯೋಜನೆಯ ಅನುಷ್ಠಾನಕ್ಕಾಗಿ ಪರಿಗಣಿಸುತ್ತೇನೆಂದು ಹೇಳಿದರು.


ಉಪ ನಿರ್ದೇಶಕರು(DMA) ಈ ಕಾರ್ಯಕ್ರಮದಲ್ಲಿ ತೆಗೆದುಕೊಂಡ ನಿರ್ಧಾರಗಳು

1. ಎಲ್ಲಾ ಸಿಡಿ.ಎಸ್. ಸದಸ್ಯರಿಗೆ ಸಾರಿಗೆ ಸೌಲಭ್ಯಗಳನ್ನು(ಟಿ.ಎ) ಕೊಡಲು ಮೇಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ನಿರ್ಣಯ ತೆಗೆದುಕೊಳ್ಳುತ್ತೇವೆಂದು ಹೇಳಿದರು.
2. ಎಸ್.ಜೆ.ಎಸ್.ಆರ್.ವೈ ಯೋಜನೆಗೆ ಸೂಕ್ತ ಫಲಾನುಭವಿಗಳನ್ನು ಗುರುತಿಸಲು ನಗರದ ಸಮೀಕ್ಷೆಯನ್ನು ಮುಂದಿನ ತಿಂಗಳು (ಏಪ್ರಿಲ್ 2011) ಕೈಗೊಳ್ಳುವುದಾಗಿ ತಿಳಿಸಿದರು.
3. ಬ್ಯಾಂಕಿನ ಅಧಿಕಾರಿಗಳು ಸಾಲವನ್ನು ನೀಡಲು ತುಂಬಾ ವಿಳಂಬ ಮಾಡಿದ್ದಲ್ಲಿ ಮತ್ತು ಭದ್ರತೆಯನ್ನು ಕೇಳಿದ್ದಲ್ಲಿ ಲಿಖಿತ ದೂರನ್ನು ಕೊಟ್ಟರೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
4. ಕಾರ್ಯಕ್ರಮದಲ್ಲಿ ಬಂದ ಎಲ್ಲಾ ಸಲಹೆ ಮತ್ತು ಶಿಫಾರಸ್ಸುಗಳನ್ನು ಎಸ್.ಜೆ.ಎಸ್.ಆರ್.ವೈ ಯೋಜನೆಯ ಅನುಷ್ಠಾನಕ್ಕಾಗಿ ಪರಿಗಣಿಸುತ್ತೇನೆಂದು ಹೇಳಿದರು.


ಈ ಕಾರ್ಯಕ್ರಮದ ಫೋಟೋಗಳು:

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯ ಅತಿಥಿಗಳು ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಮಾಹಿತಿಯುಳ್ಳ ಕೈಪಿಡಿಯನ್ನು ಶ್ರೀ ಪುರುಶೋತ್ತಮ (ಬಲಗಡೆಯಿಂದ-ಉಪ ಆಯುಕ್ತರು ಬಿ.ಬಿ.ಎಂ.ಪಿ) ಶ್ರೀ ಬಿ.ಎಫ್.ಪಾಟೀಲ್(ಜಂಟಿ ಆಯುಕ್ತರು, ದಕ್ಷಿಣ ವಲಯ ಬಿ.ಬಿ.ಎಂ.ಪಿ,ಶ್ರೀಮತಿ ಜಯಂತಿ- (ಉಪ ನಿರ್ದೇಶಕರು- ಪೌರಾಡಳಿತ ನಿರ್ದೇಶನಾಲಯ), ಶ್ರೀ ವೆಂಕಟೇಶ್ (ದಲಿತ ಬಹುಜನ ಚಳುವಳಿ), ಹಾಗೂ ಲಕ್ಷ್ಮೀಕಾಂತ್ (ಪ್ರಾಜೆಕ್ಟ್ ಕೋ-ಆರ್ಡಿನೇಟರ್- ಸಿವಿಕ್ ಬೆಂಗಳೂರು) ಬಿಡುಗಡೆಗೊಳಿಸಿದರು.








ಈ ಕಾರ್ಯಕ್ರಮದಲ್ಲಿ ಸಮುದಾಯದ ಜನರು, ಅಧಕಾರಿಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು












ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮುದಾಯದ ಜನರು ತಮ್ಮ ಸಮಸ್ಯೆಗಳನ್ನು ಹೇಳುತ್ತಾ ಎಸ್.ಜೆ.ಎಸ್.ಆರ್.ವೈ ಯೋಜನೆಯು ಉತ್ತಮ ರೀತಿಯಲ್ಲಿ ಅನುಷ್ಠಾನವಾಗಲು ಹಲವಾರು ಸಲಹೆಗಳನ್ನು ನೀಡುತ್ತಿರುವ ಚಿತ್ರ.

Wednesday, December 14, 2011

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಡಿ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾದ ರಾಜೀವ್ ಗಾಂಧಿ ನಗರದ ಮಂಜುಳ......

ಮಂಜುಳಾರವರು ರಾಜೀವ್ ಗಾಂಧಿ ನಗರ ಪ್ರದೇಶದಲ್ಲಿ(ಕೆ.ಆರ್.ಪುರಂ, ಬೆಂಗಳೂರು) ವಾಸವಾಗಿದ್ದು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾಗಿದ್ದಾರೆ. ಈ ಪ್ರದೇಶದಲ್ಲಿರುವ ಯಾವ ಬಡಕುಟುಂಬಕ್ಕೂ 2009ರವರೆಗೂ ಈ ಯೋಜನೆಯ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ ಮತ್ತು ಈ ಯೋಜನೆಯ ಸೌಲಭ್ಯವನ್ನು ಪಡೆದ ಫಲಾನುಭವಿಗಳೇ ಇರಲಿಲ್ಲ.

ಆ ನಂತರ.....?
ಆ ಸಮಯದಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆಯು 2009ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲಾ ಬಡಜನರನ್ನು ಒಟ್ಟುಗೂಡಿಸಿ ಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದ ಮಂಜುಳಾರವರು 2010 ಜೂನ್ ತಿಂಗಳಿನಲ್ಲಿ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಸಾಲ ಮತ್ತು ಸಹಾಯಧನ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸವುದಕ್ಕೆ ಅರ್ಜಿ ಸಲ್ಲಿಸಿದ್ದರು.

ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದ ಪರಿಚಯ:
ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯ ಈ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ನಗರದ ಬಡಜನರು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ ಯೋಜನಾ ವೆಚ್ಚ ರೂ. 2 ಲಕ್ಷ ಆಗಿದ್ದು, ಇದರಲ್ಲಿ ಶೇ. 25% ರಷ್ಟು ಗರಿಷ್ಠ ಸಹಾಯಧನ(ಅಂದರೆ ರೂ.50,000), ಶೇ.5% ರಷ್ಟು ಫಲಾನುಭವಿಯ ವಂತಿಗೆ(ರೂ 10,000) ಹಾಗೂ ಉಳಿದದ್ದು ಬ್ಯಾಂಕಿನ ಸಾಲ (ರೂ. 14,0000)ವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಯು ಯೋಜಿಸಿದ ಯಾವುದೇ ಉದ್ಯೋಗವನ್ನು ಕೈಗೊಳ್ಳಲು ಅವಕಾಶವಿದೆ. ಹಾಗಾಗಿ ಮಂಜುಳಾರವರು ರೂ. 1ಲಕ್ಷ ಯೋಜನಾ ವೆಚ್ಚದಲ್ಲಿ ಬಟ್ಟೆ ವ್ಯಾಪಾರವನ್ನು ಮಾಡಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದರು.

ಬಿಡುಗಡೆಯಾದ ಸಾಲ ಮತ್ತು ಸಹಾಯಧನ:
ಇವರ ನಿರೀಕ್ಷೆಯಂತೆಯೇ ಬಟ್ಟೆ ವ್ಯಾಪಾರಕ್ಕೆಂದು ರೂ. 1 ಲಕ್ಷ ಸಾಲ ಮತ್ತು ಸಹಾಯಧನ ಬಿಡುಗಡೆಯಾಗಿದೆ.
(ಸಾಲ-70000 ರೂ, ಸಹಾಯಧನ-25000 ರೂ, ಫಲಾನುಭವಿಯ ವಂತಿಗೆ-5000 ರೂ.) ಈಗ ಇವರ ನಿವಾಸದಲ್ಲೇ ಸೀರೆ, ರವಿಕೆ, ಚೂಡಿದಾರ್ ಇತರ ವಿವಿಧ ರೀತಿಯ ಬಟ್ಟೆಗಳ ವ್ಯಾಪಾರವನ್ನು ಮಾಡುತ್ತಿದ್ದಾರೆ.

Friday, December 9, 2011

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಸೌಲಭ್ಯವನ್ನು ಪಡೆದ ದೇಶಿಯಾನಗರ ಪ್ರದೇಶದ ಸಮುದಾಯದ ಜನರು
ಹಿನ್ನಲೆ:
ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯನ್ನು ಕೇಂದ್ರ ಸರ್ಕಾರ ನಗರಗಳಲ್ಲಿನ ಬಡಜನವನ್ನು ನಿವಾರಿಸುವ ಗುರಿಯನ್ನಿಟ್ಟುಕೊಂಡು 1997ರಲ್ಲಿ ಜಾರಿಗೆ ತಂದಿದೆ. 1997ರಲ್ಲಿ ಈ ಯೋಜನೆ ಬಂದಿದ್ದರೂ 2009 ರವರೆಗೂ ಅದರ ಹೆಸರೇ ಕೇಳದ, ಅದರ ಕಿಂಚಿತ್ತು ಮಾಹಿತಿಯೂ ಗೊತ್ತಿಲ್ಲದ ದೇಶಿಯಾನಗರ ಪ್ರದೇಶದ ಬಡ ನಿವಾಸಿಗಳು 2009ರ ನಂತರ ಅದರ ಮಾಹಿತಿಯನ್ನು ಪಡೆದು ಈ ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ.

ಸಿವಿಕ್ ಬೆಂಗಳೂರು ಸಂಸ್ಥೆಯು ಈ ಪ್ರದೇಶದ ಎಲ್ಲಾ ಜನರಿಗೆ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಲ್ಲಿ ಬಡಜನರಿಗಾಗಿಯೇ ಇರುವ ಹಲವಾರು ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು. ಉದಾ: ಸಾಲ ಮತ್ತು ಸಹಾಯಧನವನ್ನು ಪಡೆದು ಸ್ವ ಉದ್ದೋಗವನ್ನು ಮಾಡಿಕೊಳ್ಳುವ ಬಗ್ಗೆ, ಕೌಶಲ್ಯ ತರಬೇತಿಯನ್ನು ಪಡೆಯುವ ಬಗ್ಗೆ, ಸಮುದಾಯ ಅಭಿವೃದ್ಧಿಗಾಗಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡುವ ಬಗ್ಗೆ ಹಾಗೂ ಈ ಯೋಜನೆಯಡಿಯಲ್ಲಿ ಸಿಗುವ ಇತರ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು.

ಕುಂದುಕೊರತೆಗಳ ಅಹವಾಲು ಸಭೆಯ ಪರಿಣಾಮ:
ಸಿವಿಕ್ ಬೆಂಗಳೂರು ಸಂಸ್ಥೆಯು ದಿನಾಂಕ 27-07-11 ರಂದು ಪೂರ್ವವಲಯ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕಲ್ಯಾಣ ಇಲಾಖೆಯ(ಪೂರ್ವವಲಯ) ಸಂಯುಕ್ತಾಶ್ರದಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಕುಂದುಕೊರತೆಗಳ ಅಹವಾಲು ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶಿಯಾನಗರ ಪ್ರದೇಶದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡಬೇಕಾಗಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ಬಗ್ಗೆ ಬರವಣಿಗೆಯ ಮೂಲಕ ದಿನಾಂಕ 20-09-11 ರಂದು ಪತ್ರವನ್ನು ಸಹ ಬರೆದಿದ್ದಾರೆ. ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ದಿನಾಂಕ-29-11-11ರಂದು ಈ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ಸೌಲಭ್ಯವನ್ನು ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಎಸ್.ಜೆ.ಎಸ್.ಆರ್.ವೈ ಯೋಜನೆಯ ಈ ಸೌಲಭ್ಯವನ್ನು ದೇಶಿಯಾನಗರದ ಪಡೆದಿದ್ದಾರೆ.

ಆಟಿಕೆ ಸಾಮಗ್ರಿಗಳ ವಿವರ :
ರಾಕಿಂಗ್ ಹಾರ್ಸ್(ಮರದ ಕುದುರೆ) -1
3 ಚಕ್ರದ ಸೈಕಲ್ -2
ವಿವಿಧ ರೀತಿಯ ಆಕೃತಿ(ಗೊಂಬೆಗಳು) -1 ಸೆಟ್
ಪ್ರಾಣಿಗಳ ಗೊಂಬೆಗಳು -1 ಸೆಟ್
ಕೌಂಟಿಗ್ ಫ್ರೇಮ್ -2 ಸೆಟ್
ಪ್ಲಾಸ್ಟಿಕ್ ಪ್ರಾಣಿಗಳು(ಗೊಂಬೆಗಳು)-1 ಸೆಟ್
ಹಕ್ಕಿಗಳ ಗೊಂಬೆಗಳು-1 ಸೆಟ್
ಚಿಕ್ಕ ಪ್ಲಾಸ್ಟಿಕ್ ಬಸ್-1 ಸೆಟ್
ಚಿಕ್ಕ ಟ್ರೈನ್ ಇಂಜಿನ್-1 ಸೆಟ್
ಬಾಲ್ಸ್-2
ಬಿಲ್ಡಿಂಗ್ ಬ್ಲಾಕ್ ಸೆಟ್ -1
ಮಣೆ(ಮರದ್ದು) - 4 ಎಲ್ಲಾ ಆಟಿಕೆ ಸಾಮಗ್ರಿಗಳನ್ನು ಒಳಗೊಂಡಿರುವ ಚಿತ್ರ



ಫೋಟೋಗಳು :



ದೇಶಿಯಾನಗರ ಸಮುದಾಯದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ನೀಡಲು ಅಲ್ಲಿನ ಅಂಗನವಾಡಿ ಸಹಾಯಕಿಗೆ ಇಲಾಖೆಯಿಂದ ಬಂದಂತಹ ಆಟಿಕೆ ಸಾಮಗ್ರಿಗಳನ್ನು ನೀಡುತ್ತಿರುವ ಚಿತ್ರ.











ಇಲ್ಲಿನ ಮಕ್ಕಳು ಸೈಕಲ್ ಸವಾರಿ ಮಾಡುತ್ತಾ, ಕುದುರೆ ಸವಾರಿ ಮಾಡುತ್ತಾ ಸಂಭ್ರಮಿಸುತ್ತಿರುವ ಚಿತ್ರಗಳು











ಸಿವಿಕ್ ಬೆಂಗಳೂರು