Friday, December 9, 2011

ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯ ಸೌಲಭ್ಯವನ್ನು ಪಡೆದ ದೇಶಿಯಾನಗರ ಪ್ರದೇಶದ ಸಮುದಾಯದ ಜನರು
ಹಿನ್ನಲೆ:
ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯನ್ನು ಕೇಂದ್ರ ಸರ್ಕಾರ ನಗರಗಳಲ್ಲಿನ ಬಡಜನವನ್ನು ನಿವಾರಿಸುವ ಗುರಿಯನ್ನಿಟ್ಟುಕೊಂಡು 1997ರಲ್ಲಿ ಜಾರಿಗೆ ತಂದಿದೆ. 1997ರಲ್ಲಿ ಈ ಯೋಜನೆ ಬಂದಿದ್ದರೂ 2009 ರವರೆಗೂ ಅದರ ಹೆಸರೇ ಕೇಳದ, ಅದರ ಕಿಂಚಿತ್ತು ಮಾಹಿತಿಯೂ ಗೊತ್ತಿಲ್ಲದ ದೇಶಿಯಾನಗರ ಪ್ರದೇಶದ ಬಡ ನಿವಾಸಿಗಳು 2009ರ ನಂತರ ಅದರ ಮಾಹಿತಿಯನ್ನು ಪಡೆದು ಈ ಯೋಜನೆಯ ಸೌಲಭ್ಯವನ್ನು ಪಡೆದಿದ್ದಾರೆ.

ಸಿವಿಕ್ ಬೆಂಗಳೂರು ಸಂಸ್ಥೆಯು ಈ ಪ್ರದೇಶದ ಎಲ್ಲಾ ಜನರಿಗೆ ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯಲ್ಲಿ ಬಡಜನರಿಗಾಗಿಯೇ ಇರುವ ಹಲವಾರು ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು. ಉದಾ: ಸಾಲ ಮತ್ತು ಸಹಾಯಧನವನ್ನು ಪಡೆದು ಸ್ವ ಉದ್ದೋಗವನ್ನು ಮಾಡಿಕೊಳ್ಳುವ ಬಗ್ಗೆ, ಕೌಶಲ್ಯ ತರಬೇತಿಯನ್ನು ಪಡೆಯುವ ಬಗ್ಗೆ, ಸಮುದಾಯ ಅಭಿವೃದ್ಧಿಗಾಗಿ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡುವ ಬಗ್ಗೆ ಹಾಗೂ ಈ ಯೋಜನೆಯಡಿಯಲ್ಲಿ ಸಿಗುವ ಇತರ ಎಲ್ಲಾ ಸೌಲಭ್ಯಗಳ ಕುರಿತು ಮಾಹಿತಿಯನ್ನು ನೀಡಿತ್ತು.

ಕುಂದುಕೊರತೆಗಳ ಅಹವಾಲು ಸಭೆಯ ಪರಿಣಾಮ:
ಸಿವಿಕ್ ಬೆಂಗಳೂರು ಸಂಸ್ಥೆಯು ದಿನಾಂಕ 27-07-11 ರಂದು ಪೂರ್ವವಲಯ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕಲ್ಯಾಣ ಇಲಾಖೆಯ(ಪೂರ್ವವಲಯ) ಸಂಯುಕ್ತಾಶ್ರದಲ್ಲಿ ಎಸ್.ಜೆ.ಎಸ್.ಆರ್.ವೈ ಯೋಜನೆಯ ಬಗ್ಗೆ ಕುಂದುಕೊರತೆಗಳ ಅಹವಾಲು ಮೇಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶಿಯಾನಗರ ಪ್ರದೇಶದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನು ನೀಡಬೇಕಾಗಿ ಅಧಿಕಾರಿಗಳಿಗೆ ಕೇಳಿಕೊಂಡಿದ್ದರು. ಈ ಬಗ್ಗೆ ಬರವಣಿಗೆಯ ಮೂಲಕ ದಿನಾಂಕ 20-09-11 ರಂದು ಪತ್ರವನ್ನು ಸಹ ಬರೆದಿದ್ದಾರೆ. ಇದಕ್ಕೆ ಸ್ಪಂಧಿಸಿದ ಅಧಿಕಾರಿಗಳು ದಿನಾಂಕ-29-11-11ರಂದು ಈ ಪ್ರದೇಶದ ಅಂಗನವಾಡಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳ ಸೌಲಭ್ಯವನ್ನು ನೀಡಿದ್ದಾರೆ. ಮೊಟ್ಟಮೊದಲ ಬಾರಿಗೆ ಎಸ್.ಜೆ.ಎಸ್.ಆರ್.ವೈ ಯೋಜನೆಯ ಈ ಸೌಲಭ್ಯವನ್ನು ದೇಶಿಯಾನಗರದ ಪಡೆದಿದ್ದಾರೆ.

ಆಟಿಕೆ ಸಾಮಗ್ರಿಗಳ ವಿವರ :
ರಾಕಿಂಗ್ ಹಾರ್ಸ್(ಮರದ ಕುದುರೆ) -1
3 ಚಕ್ರದ ಸೈಕಲ್ -2
ವಿವಿಧ ರೀತಿಯ ಆಕೃತಿ(ಗೊಂಬೆಗಳು) -1 ಸೆಟ್
ಪ್ರಾಣಿಗಳ ಗೊಂಬೆಗಳು -1 ಸೆಟ್
ಕೌಂಟಿಗ್ ಫ್ರೇಮ್ -2 ಸೆಟ್
ಪ್ಲಾಸ್ಟಿಕ್ ಪ್ರಾಣಿಗಳು(ಗೊಂಬೆಗಳು)-1 ಸೆಟ್
ಹಕ್ಕಿಗಳ ಗೊಂಬೆಗಳು-1 ಸೆಟ್
ಚಿಕ್ಕ ಪ್ಲಾಸ್ಟಿಕ್ ಬಸ್-1 ಸೆಟ್
ಚಿಕ್ಕ ಟ್ರೈನ್ ಇಂಜಿನ್-1 ಸೆಟ್
ಬಾಲ್ಸ್-2
ಬಿಲ್ಡಿಂಗ್ ಬ್ಲಾಕ್ ಸೆಟ್ -1
ಮಣೆ(ಮರದ್ದು) - 4 ಎಲ್ಲಾ ಆಟಿಕೆ ಸಾಮಗ್ರಿಗಳನ್ನು ಒಳಗೊಂಡಿರುವ ಚಿತ್ರ



ಫೋಟೋಗಳು :



ದೇಶಿಯಾನಗರ ಸಮುದಾಯದ ಜನರು ತಮ್ಮ ಪ್ರದೇಶದ ಅಂಗನವಾಡಿ ಮಕ್ಕಳಿಗೆ ನೀಡಲು ಅಲ್ಲಿನ ಅಂಗನವಾಡಿ ಸಹಾಯಕಿಗೆ ಇಲಾಖೆಯಿಂದ ಬಂದಂತಹ ಆಟಿಕೆ ಸಾಮಗ್ರಿಗಳನ್ನು ನೀಡುತ್ತಿರುವ ಚಿತ್ರ.











ಇಲ್ಲಿನ ಮಕ್ಕಳು ಸೈಕಲ್ ಸವಾರಿ ಮಾಡುತ್ತಾ, ಕುದುರೆ ಸವಾರಿ ಮಾಡುತ್ತಾ ಸಂಭ್ರಮಿಸುತ್ತಿರುವ ಚಿತ್ರಗಳು











ಸಿವಿಕ್ ಬೆಂಗಳೂರು

2 comments:

  1. ನಿಮ್ಮ ವರದಿ ತುಂಬಾ ಚನ್ನಾಗಿದೆ ಲಕ್ಷ್ಮೀಕಾಂತ್ ರವರೆ

    ReplyDelete