Wednesday, December 14, 2011

ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆ(ಎಸ್.ಜೆ.ಎಸ್.ಆರ್.ವೈ)ಯಡಿ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾದ ರಾಜೀವ್ ಗಾಂಧಿ ನಗರದ ಮಂಜುಳ......

ಮಂಜುಳಾರವರು ರಾಜೀವ್ ಗಾಂಧಿ ನಗರ ಪ್ರದೇಶದಲ್ಲಿ(ಕೆ.ಆರ್.ಪುರಂ, ಬೆಂಗಳೂರು) ವಾಸವಾಗಿದ್ದು, ಸ್ವರ್ಣ ಜಯಂತಿ ಶಹರಿ ರೋಜ್ಗಾರ್ ಯೋಜನೆಯ ಸೌಲಭ್ಯ ಪಡೆದು ಸ್ವಯಂ ಉದ್ಯೋಗಿಯಾಗಿದ್ದಾರೆ. ಈ ಪ್ರದೇಶದಲ್ಲಿರುವ ಯಾವ ಬಡಕುಟುಂಬಕ್ಕೂ 2009ರವರೆಗೂ ಈ ಯೋಜನೆಯ ಸಂಪೂರ್ಣ ಮಾಹಿತಿ ಗೊತ್ತಿರಲಿಲ್ಲ ಮತ್ತು ಈ ಯೋಜನೆಯ ಸೌಲಭ್ಯವನ್ನು ಪಡೆದ ಫಲಾನುಭವಿಗಳೇ ಇರಲಿಲ್ಲ.

ಆ ನಂತರ.....?
ಆ ಸಮಯದಲ್ಲಿ ಸಿವಿಕ್ ಬೆಂಗಳೂರು ಸಂಸ್ಥೆಯು 2009ರಲ್ಲಿ ಈ ಪ್ರದೇಶಕ್ಕೆ ಭೇಟಿ ನೀಡಿ ಎಲ್ಲಾ ಬಡಜನರನ್ನು ಒಟ್ಟುಗೂಡಿಸಿ ಯೋಜನೆಯಡಿ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿತ್ತು. ಈ ಯೋಜನೆಯ ಬಗ್ಗೆ ಮಾಹಿತಿ ಪಡೆದ ಮಂಜುಳಾರವರು 2010 ಜೂನ್ ತಿಂಗಳಿನಲ್ಲಿ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ಸಾಲ ಮತ್ತು ಸಹಾಯಧನ ಪಡೆದು ಸ್ವಯಂ ಉದ್ಯೋಗ ಪ್ರಾರಂಭಿಸವುದಕ್ಕೆ ಅರ್ಜಿ ಸಲ್ಲಿಸಿದ್ದರು.

ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದ ಪರಿಚಯ:
ಎಸ್.ಜೆ.ಎಸ್.ಆರ್.ವೈ ಯೋಜನೆಯಡಿಯ ಈ ನಗರ ಸ್ವಯಂ ಉದ್ಯೋಗ ಕಾರ್ಯಕ್ರಮದಡಿಯಲ್ಲಿ ನಗರದ ಬಡಜನರು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಗರಿಷ್ಠ ಯೋಜನಾ ವೆಚ್ಚ ರೂ. 2 ಲಕ್ಷ ಆಗಿದ್ದು, ಇದರಲ್ಲಿ ಶೇ. 25% ರಷ್ಟು ಗರಿಷ್ಠ ಸಹಾಯಧನ(ಅಂದರೆ ರೂ.50,000), ಶೇ.5% ರಷ್ಟು ಫಲಾನುಭವಿಯ ವಂತಿಗೆ(ರೂ 10,000) ಹಾಗೂ ಉಳಿದದ್ದು ಬ್ಯಾಂಕಿನ ಸಾಲ (ರೂ. 14,0000)ವಾಗಿರುತ್ತದೆ. ಈ ಯೋಜನೆಯಡಿಯಲ್ಲಿ ಫಲಾನುಭವಿಯು ಯೋಜಿಸಿದ ಯಾವುದೇ ಉದ್ಯೋಗವನ್ನು ಕೈಗೊಳ್ಳಲು ಅವಕಾಶವಿದೆ. ಹಾಗಾಗಿ ಮಂಜುಳಾರವರು ರೂ. 1ಲಕ್ಷ ಯೋಜನಾ ವೆಚ್ಚದಲ್ಲಿ ಬಟ್ಟೆ ವ್ಯಾಪಾರವನ್ನು ಮಾಡಲು ನಿರ್ಧರಿಸಿ ಅರ್ಜಿ ಸಲ್ಲಿಸಿದ್ದರು.

ಬಿಡುಗಡೆಯಾದ ಸಾಲ ಮತ್ತು ಸಹಾಯಧನ:
ಇವರ ನಿರೀಕ್ಷೆಯಂತೆಯೇ ಬಟ್ಟೆ ವ್ಯಾಪಾರಕ್ಕೆಂದು ರೂ. 1 ಲಕ್ಷ ಸಾಲ ಮತ್ತು ಸಹಾಯಧನ ಬಿಡುಗಡೆಯಾಗಿದೆ.
(ಸಾಲ-70000 ರೂ, ಸಹಾಯಧನ-25000 ರೂ, ಫಲಾನುಭವಿಯ ವಂತಿಗೆ-5000 ರೂ.) ಈಗ ಇವರ ನಿವಾಸದಲ್ಲೇ ಸೀರೆ, ರವಿಕೆ, ಚೂಡಿದಾರ್ ಇತರ ವಿವಿಧ ರೀತಿಯ ಬಟ್ಟೆಗಳ ವ್ಯಾಪಾರವನ್ನು ಮಾಡುತ್ತಿದ್ದಾರೆ.

No comments:

Post a Comment